ಅಭಿಪ್ರಾಯ / ಸಲಹೆಗಳು

ಮೂಲ

ಕರ್ನಾಟಕ ಸರ್ಕಾರವು ೨೦೧೧-೧೨ರ ವಿತ್ತೀಯ ವರ್ಷದ ಆಯವ್ಯಯದಲ್ಲಿ ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರದ (ಸ.ಜ.ಸಂ.ನಿ.ಉ.ಕೇಂ) ಸ್ಥಾಪನೆಗೆ ಬದ್ಧವಾಗಿತ್ತು. ಸ.ಜ.ಸಂ.ನಿ.ಉ.ಕೇಂ ಸ್ಥಾಪಿಸುವ ಮೂಲಕ ಭಾರತದಲ್ಲಿಯೇ ಮೊಟ್ಟ ಮೊದಲ ಮಾದರಿಯಾಗಿದೆ. ಈ ಆಲೋಚನೆಯ ಪ್ರಾರಂಭಕ್ಕೆ ಮೂಲ ಕಾರಣವು ಜಲ ಹಾಗೂ ಆಹಾರ ಭದ್ರತೆಯನ್ನು ಸಾಧಿಸುವ ದಿಶೆಯಲ್ಲಿ ಮುನ್ನಡೆಯಬೇಕೆಂಬ ಕರ್ನಾಟಕ ಸರ್ಕಾರದ ಗುರಿಯನ್ನು ಸುಗಮಗೊಳಿಸಲು ಅವಶ್ಯಕವಾದ ಪರಿಸರವನ್ನು ಸೃಷ್ಟಿಸುವುದಾಗಿದೆ. ಸಮಗ್ರ ಜಲಸಂಪನ್ಮೂಲ ನಿರ್ವಹಣೆಯ (ಸ.ಜ.ಸಂ.ನಿ) ಕಾರ್ಯನಕ್ಷೆಯು ನದಿ ಕೊಳ್ಳ ಮತ್ತು ಉಪ್ಪ ಕೊಳ್ಳ ಮಟ್ಟದಲ್ಲಿ ನೆಲ ಹಾಗೂ ಜಲ ಸಂಬಂಧಿತ ನಿರ್ವಹಣಾ ಆಯಾಮಗಳನ್ನು ಸಮಗ್ರವಾಗಿಸಲು ಅವಕಾಶಗಳನ್ನು ಒದಗಿಸುತ್ತದೆ.


ಜಲ ಸಂಪನ್ಮೂಲ ಇಲಾಖೆ (ಜ.ಸಂ.ಇ) ಸ.ಜ.ಸಂ.ನಿ.ಉ.ಕೇಂ ಒಂದು ವಿಚಾರ ವೇದಿಕೆಯಂತೆ ಕಾರ್ಯನಿರ್ವಹಿಸುವುದು ಮತ್ತು ಯೋಜನಾ ವಿಶ್ಲೇಷಣೆ, ಸಂಶೋಧನೆ, ಯೋಜನೆ, ಸಾಮರ್ಥ್ಯ ವೃದ್ಧಿ ಮತ್ತು ಇಲಾಖೆಯ ೨೦೩೦ರ ಭವಿಷ್ಯದ ಗುರಿಗಾಗಿ ಜ್ಞಾನ ಬೆಳವಣಿಗೆಯಲ್ಲಿ ತೊಡಗಿರುತ್ತದೆ. ಸ.ಜ.ಸಂ.ನಿ.ಉ.ಕೇಂ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳು, ಜಲ ಸಂಪನ್ಮೂಲ ಇಲಾಖೆಯ (ಜ.ಸಂ.ಇ) ಸಂಸ್ಥೆಗಳು ಅಂದರೆ, ನಿಗಮಗಳು, ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಅಚ್ಚುಕಟ್ಟು ಪ್ರಾಧಿಕಾರ, ಕರ್ನಾಟಕ ಅಭಿಯಂತರರ ಸಂಶೋಧನಾ ಸಂಸ್ಥೆ ಮತ್ತು ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ, ಭಾರತ ಸರ್ಕಾರದ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಸಂರಕ್ಷಣಾ ಸಚಿವಾಲಯ ಮತ್ತು ಅದರ ಅಂಗ ಸಂಸ್ಥೆಗಳಾದ ಕೇಂದ್ರ ಜಲ ಆಯೋಗ, ಕೇಂದ್ರ ಅಂತರ್ಜಲ ಮಂಡಳಿ, ರಾಷ್ಟ್ರೀಯ ಜಲ ಪ್ರಚಾರಕ ಇತ್ಯಾದಿ ನಾಗರಿಕ ಸಮಾಜ, ಖಾಸಗಿ ವಲಯ, ರೈತರು ಮತ್ತು ನೀರು ಬಳಕೆದಾರರ ಸಹಕಾರ ಸಂಘಗಳು (ನೀ.ಬ.ಸ.ಸ) ಮತ್ತು ಇತರ ಸಂಸ್ಥೆಗಳೊಂದಿಗೆ ರಾಜ್ಯದ ಜಲ ಸಂಪನ್ಮೂಲ ನಿರ್ವಹಣೆಗಾಗಿ ಜ.ಸಂ.ಇ ಗೆ ಸಮಗ್ರ ಸಲಹೆಯನ್ನು ಒದಗಿಸುವ ಕಾರ್ಯನಿರ್ವಹಿಸುತ್ತದೆ.

ಇತ್ತೀಚಿನ ನವೀಕರಣ​ : 09-12-2020 10:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಮಗ್ರ ಜಲ ಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080