ಅಭಿಪ್ರಾಯ / ಸಲಹೆಗಳು

ಕ ಸ ಸು ಜ ಸಂ ನಿ ಹೂ ಯೋ

 

ಕರ್ನಾಟಕ ಸಮಗ್ರ ಮತ್ತು ಸುಸ್ಥಿರ ಜಲ ಸಂಪನ್ಮೂಲ ನಿರ್ವಹಣ ಹೂಡಿಕೆ ಯೋಜನೆ

ದಕ್ಷಿಣ ಭಾರತದ ಕರ್ನಾಟಕ ರಾಜ್ಯವು ಹೆಚ್ಚಿದ ಅಂತರ-ವಲಯ ನೀರಿನ ಬೇಡಿಕೆಯ ಕಾರಣಗಳಿಂದ ನೀರಿಗೆ ಬಹಳ ಪ್ರಯಾಸಪಡುವ ಪರಿಸ್ಥಿತಿಯಲ್ಲಿದೆ. ಕೃಷ್ಣ ಮತ್ತು ಕಾವೇರಿ ರಾಜ್ಯದ ಮೂಲಕ ಹರಿಯುವ ಎರಡು ಪ್ರಮುಖ ನದಿಗಳು. ರಾಜ್ಯದ ನೀರಿನ ಸಂಪನ್ಮೂಲಗಳು ಸರಿಸುಮಾರು 1,072 m3/ ವ್ಯಕ್ತಿ / ವರ್ಷದೊಂದಿಗೆ ಸೀಮಿತವಾಗಿವೆ. ನೀರಿನ ಬೇಡಿಕೆಯು 2000 ರಲ್ಲಿ 37,419 ದಶಲಕ್ಷ m3 ರಿಂದ 2025 ರ ಹೊತ್ತಿಗೆ 52,366 ಮಿಲಿಯನ್ m3 ಗೆ, ಅಂದರೆ ಶೇಕಡ 40 ರಷ್ಟು ಏರಿಕೆ ಕಂಡಿದೆ. ಸ್ಪರ್ಧಾತ್ಮಕ ಬೇಡಿಕೆಗಳ ಕಾರಣದಿಂದಾಗಿ ಕೃಷಿ ಕ್ಷೇತ್ರದಿಂದ ನೀರು ಬೇಡಿಕೆಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. 2000 ದಲ್ಲಿ 84% ರಿಂದ 2025 ರ ಹೊತ್ತಿಗೆ 73% ಕ್ಕೆ ಇಳಿಯುವ ಸಾಧ್ಯತೆಯಿದೆ. ಸ್ಪರ್ಧಾತ್ಮಕ ಬೇಡಿಕೆಗಳಲ್ಲಿ ಏರಿಕೆಯಾಗುವುದನ್ನುನಿರೀಕ್ಷಿಸಲಾಗಿದ್ದು, ಈ ಬೇಡಿಕೆಗಳನ್ನು ಪೂರೈಸುವುದು ಒಂದು ಪ್ರಮುಖ ಸವಾಲಾಗಿದ್ದು, ಈ ಸವಾಲನ್ನುಸರಿಯಾಗಿ ಎದುರಿಸದಿದ್ದರೆ, ಸುಸ್ಥಿರ ಆರ್ಥಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು.

ರಾಜ್ಯದ ಜಲ ಒತ್ತಡವು ಅಸಮವಾದ ಪ್ರಾದೇಶಿಕ ಮತ್ತು ನೀರಿನ ಸಂಪನ್ಮೂಲಗಳ ವಿತರಣೆ ಮತ್ತು ಹವಾಮಾನ ಬದಲಾವಣೆಯ ಭವಿಷ್ಯದ ಪರಿಣಾಮಗಳಿಂದ ಉಲ್ಬಣಗೊಳ್ಳುತ್ತದೆ.ದಾಖಲಾದಸಾಕ್ಷ್ಯಗಳ ಅನುಸಾರವಾಗಿ ವಿವಿಧ ನೀರಿನ ಬಳಕೆದಾರ ಗುಂಪುಗಳ (ಉದ್ಯಮ, ದೇಶೀಯ ಮತ್ತು ವಿದ್ಯುತ್ ಉತ್ಪಾದನೆಯಂತಹ) ನಡುವಿನ ದುರ್ಬಲವಾದ ಹೊಂದಾಣಿಕೆಯು ಈಗಾಗಲೇ ಸೀಮಿತ ನೀರಿನ ಸಂಪನ್ಮೂಲಗಳ ನಿರ್ವಹಣೆಗೆ ತೊಡಕು ಉಂಟುಮಾಡಲು ಕಾರಣವಾಗಿದೆ ಎಂದು ಸೂಚಿಸುತ್ತದೆ. ನೀರು, ಭೂಮಿ ಮತ್ತು ಸಂಬಂಧಿತ ಸಂಪನ್ಮೂಲಗಳ ಸಮನ್ವಯಗೊಂಡ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಉತ್ತೇಜಿಸುವ ಸಮಗ್ರ ನೀರಿನ ಸಂಪನ್ಮೂಲ ನಿರ್ವಹಣೆ (ಐಡಬ್ಲ್ಯುಆರ್ಎಮ್) ವಿಧಾನವನ್ನು ಅಳವಡಿಸಿಕೊಳ್ಳುವುದರಿಂದ ಪರಿಸರ ಮತ್ತು ಪರಿಸರಕ್ಕೆ ಸುಸ್ಥಿರತೆಯನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಹಾಗು ಸಮನಾಗಿ ಆರ್ಥಿಕ ಮತ್ತು ಸಾಮಾಜಿಕ ಕಲ್ಯಾಣ ಮತ್ತು ಅಭಿವೃಧ್ಧಿ ಹೊಂದಲು ಸಾಧ್ಯವಾಗುತ್ತದೆ. ಕರ್ನಾಟಕ ರಾಜ್ಯವು ಸಮಗ್ರ ಮತ್ತು ಸುಸ್ಥಿರ ಜಲಾನಯನ ನಿರ್ವಹಣೆ ಹಾಗು ಹೂಡಿಕೆಯ ಯೋಜನೆಯನ್ನು (KISWRMIP) ರೂಪಿಸಲು ಡಿಸೆಂಬರ್ 2011 ರಲ್ಲಿ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಯಿಂದ ಕರ್ನಾಟಕ ರಾಜ್ಯ ಸರ್ಕಾರದ ಜಲ ಸಂಪನ್ಮೂಲ ಇಲಾಖೆ (WRD) ಗೆ ಮೇಲಿನ ಗುರಿ ಯೋಜನಾ ಪ್ರಿಪರೇಟರಿ ಟೆಕ್ನಿಕಲ್ ಅಸಿಸ್ಟೆನ್ಸ್ (ಪಿಪಿಟಿಎ) ಅನ್ನು ಅನುಮೋದಿಸಲಾಯಿತು. $ 150 ಮಿಲಿಯನ್ ಸಾಲವನ್ನು ಎಡಿಬಿ ಅನುಮೋದಿಸಿತು, ಹಾಗು ಕರ್ನಾಟಕ ರಾಜ್ಯ ಸರ್ಕಾರ $ 75 ಮಿಲಿಯನ್ ಮೊತ್ತದ ಹಣಕಾಸು ನೀಡಲಿದೆ. ಕಾರ್ಯಕ್ರಮದ ಒಟ್ಟು ವೆಚ್ಚ $ 225 ಮಿಲಿಯನ್.

 

ಇತ್ತೀಚಿನ ನವೀಕರಣ​ : 17-05-2023 05:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಮಗ್ರ ಜಲ ಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080